Article

ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ


ಮೂಲ ರಚನೆ:- ಸೂರಿ ವೆಂಕಟ್ರಮಣ ಶಾಸ್ತ್ರಿಗಳು ಕರ್ಕಿ

ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ ಎಂಬ ನಾಟಕದ ನೋಡುಗನ ಅಭಿಪ್ರಾಯ

ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಮೊದಲ ದಿನದಂದು ನೋಡಿದ ಇಗ್ಗಪ್ಪ ಹೆಗಡೆಯವರ ಮದುವೆ ಪ್ರಹಸನ ಬಹಳವಾಗಿ ಕಾಡಿತು.

ಇದು ಕನ್ನಡದ ಮೊದಲ ಸಾಮಾಜಿಕ ನಾಟಕ.
ಹವ್ಯಕರಿಗೆ ಹೆಮ್ಮೆ ಕೊಡುವ ಸಂಗತಿಯೂ ಹೌದು. ಅದರಲ್ಲೂ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸಹಸ್ರಾರು ಜನರೆದುರು ಕಣ್ಮನ ತಣಿಸುವಂಗೆ ಇಗ್ಗಪ್ಪ ಹೆಗಡೆಯವರೆ ಎದ್ದು ಬಂದರೇನೊ ಅನಿಸುವಷ್ಟು ಚಂದವಾಗಿ ಮೂಡಿಬಂದಿದೆ ಅಂದರೆ ಅತಶಯೋಕ್ತಿ ಅನಿಸದು.

ಹವ್ಯ ಸಮುದಾಯ ಒಂದು ಕಾಲದಲ್ಲಿ ಕೌಟುಂಬಿಕವಾಗಿಯೂ ಸಾಮಾಜಿಕವಾಗಿಯೂ ಹ್ಯಾಗಿತ್ತು? ಎಂಬುದು ಇದು ತೋರಿಸಿತು. ಇವತ್ತಿಗೆ ಡಾಂಬಿಕವಾಗಿ ಮರುಳುಬಿದ್ದ ನಮಗೆ ಅಂದಿನ ಕಾಲ ಘಟ್ಟದ ಆ ಸಂದರ್ಭ ಇಂದಿನ ಕಾಲಘಟ್ಟಕ್ಕೆ ಹಾಸ್ಯಾಸ್ಪದ ಅನಿಸಬಹುದು.

ಪ್ರಹಸನದಲ್ಲಿ ಕಂಡಂತೆ… ಎಲ್ಲರೂ ಅಭಿನಯ ಚತುರರು… ಕಲಾರಸಿಕಗರಿಗೆ ಔತಣವಿತ್ತವರು.

ಈ ಕಥೆಯ ಪಾತ್ರಗಳು ಏನು ಹೇಳುತ್ತಿವೆ ಎಂಬುದನ್ನ ಯೋಚಿಸಿದಾಗ‌ ಹವ್ಯ ಸಮುದಾಯ‌ ಶತಮನಾದಂಚಿನ ಜೀವನದ ಗತಿಗಳ ಬಗೆಗೆ ಸಮಾಜದ ಅನಿಷ್ಟಗಳ ಬಗೆಗೆ, ಬದುಕು ಭಯಕೆಯ ಬಿಸಿಯಲ್ಲಿ ಬಿದ್ದು, ಸಮಾಜದಲ್ಲಿ ಒಂಟಿ ವಿದವೆಯ ಹ್ಯಾಗೆ ಬಳಸಿಕೊಂಡರು ಎಂಬುದರ ಬಗೆಗೆ, ಮದುವೆಗೆ ವಯಸ್ಸಾದರೂ ಬಾಳಿಗೊಂದು ಹೆಣ್ಣು ಬೇಕು ಎಂಬ ಕಾರಣಕ್ಕಾಗಿ ಮೂರನೆ ಮದುವೆ ಮಾಡಿಕೊಂಡಿರುವ ಇಗ್ಗಪ್ಪ ಹೆಗಡೆಯವರ ಚಾಪಲ್ಯ, ಹದಿಹರೆಯದಲ್ಲೆ ಗಂಡನನ್ನು ಕಳೆದುಕೊಂಡ ವೆದವ್ಯಪಟ್ಟ ಕಟ್ಟಿಕೊಂಡು, ಕೇಶಮುಂಡನ ಮಾಡಿಕೊಂಡು ಕೆಂಪು ಮತ್ತು ಬಿಳೆಸೀರೆಯಲ್ಲಿ ಕಾಣುವ ಅನೇಕ ಹವ್ಯ ಹೆಣ್ಣುಗಳ ಉಡುಗೆಯ ಬಗೆಗೆ…. ಸಿಕ್ಕ ಸಂದರ್ಭವನ್ನ ತನ್ನ ಉಪಯೋಗದ ಸರಕಾಗಿ ಮಾಡಿಕೊಂಡ ಭಟ್ರು, ವಾಸಪ್ಪ ಹೆಗಡೆ‌ ಇವೆಲ್ಲವೂ ಒಂದು ಕಾಲದ ನಮ್ಮ‌ ಸಮುದಾಯದ ಅಣಕದ ಪ್ರತೀಕವಾಗಿಯೇ ಕಂಡು ಬಂದವು. ಆಗಿನ ಕಾಲದ ಪರಿಸ್ಥಿತಿಗೂ, ಪರಿಸರಕ್ಕೂ ಮತ್ತು ಈಗಿನ ಕಾಲದ ಪರಿಸ್ಥಿತಿ ಮತ್ತು ಪರಿಸ್ಥಿತಿಗಳನ್ನು ತುಲನಾತ್ಮಕ ದೃಷ್ಟಿಕೋನದಿಂದ ಅಳೆಯುವಂತೆ ಮಾಡಿತು ಇಗ್ಗಪ್ಪ ಹೆಗಡೆಯವರ ವಿವಾಹ ಪ್ರಸಂಗ…

ವಿಶೇಷ ಅನಿಸಿದ್ದು ಮಾತ್ರ ನ್ಯಾಯದ ಕಟಕಟೆಗೆ ಪ್ರಪ್ರಥಮವಾಗಿ ಕೇಸು ದಾಖಲಾಗಿದ್ದು ಮಹಿಳೆಯು ಕೋರ್ಟ್ ಮೆಟ್ಟಿಲೇರಿದ್ದು ಕಂಡುಬರುತ್ತದೆ. ಆಗಾಗ ಎಲ್ಲ ಸಮುದಾಯದ ನೈತಿಕತೆಯ ಎತ್ತಿ ಹಿಡಿವ, ಹಾಗೂ ಜೀವನ ಮೌಲ್ಯಗಳ ನೆನಪಿಸುವ ಕೆಲಸವಾಗಬೇಕು. ಸಮಾಜದ ಮೇಲೆ ಸತ್ಪರಿಣಾಮ ಉಂಟುಮಾಡಲೊಸುಗವಾಗಿಯೂ ನಮ್ಮದೇ ಸಮುದಾಯದ ಹಳೆಯ ಘಟನಾವಳಿಗಳು ನಾವು ನಡೆದು ಬಂದ ದಾರಿಯನ್ನ ಒಮ್ಮೆ ಹಿಂದೆ ತಿರುಗಿ ನೋಡುವಂಗೆ ಮಾಡಬೇಕು ಅನಿಸಿತು

ಪ್ರಹಸನ ಪ್ರಸಂಗ ತುಂಬಾ ಚಂದವಾಗಿ ನಟಿಸಿದ ಕಲಾವಿದರುಗಳಿಗೆ ನಮನಗಳು…. ನೇರ ಪ್ರಸಾರ ನೀಡಿದ ಹವ್ಯಕ ಮಹಸಭಾದ ಮೀಡಿಯಾ ವಿಭಾಗದವರಿಗೂ 🙏🙏🙏
ಕೃತಜ್ಞತೆಗಳು.

By- ಶ್ರೀಮತಿ ಸುಧಾ. ಎಂ

One Comment

Leave a Reply

Your email address will not be published. Required fields are marked *