ಹೈಕುಗಳು
೧) ಬಹುದಿನದ ಬಳಿಕ
ಭೇಟಿಯಾದರೂ
ಜತೆಯಾದದ್ದು ಮೌನ
೨) ಮೋಡ ಕವಿದ
ದಿನ ಕೂಡ
ಮಳೆ ಬರಲಿಲ್ಲ
೩) ಮೊಟ್ಟೆಯೊಳಗಿನ
ಗುಟ್ಟು ರಟ್ಟಾದ
ದಿನ ಹುಟ್ಟಿದ್ದು ಹಕ್ಕಿ
೪) ಸಾಯಲು ಮಲಗಿದವ
ಮತ್ತೇಕೋ ಎದ್ದು ಕೂತ,
ಜನಕೆ ಗಾಬರಿಯಾಯ್ತು
ಹೆದರಿ ಕರೆದರು ‘ಭೂತ!’
೫) ‘ಲಂಗ’ದ
ಹುಡುಗಿಯ
ಹಿಂದೆ ಬಿದ್ದವ
‘ಮಂಗ’ನಾದ!
೬) ನಿತ್ಯ ನೀರೆರೆದ
ಗುಲಾಬಿ ಗಿಡ
ಹುಡುಗಿ ಸಿಕ್ಕ ದಿನ
ಹೂ ಬಿಟ್ಟಿತು!
– ಪ್ರಸಾದ್