Article

ಕೃಷಿ ಮತ್ತು ತಂತ್ರಜ್ಞಾನ

ಆತ್ಮಿಯರೆ ಅದೆಷ್ಟೋ ರಾಷ್ಟ್ರಗಳು ಅಭಿವೃದ್ಧಿ ಗೆ ಕೇವಲ ತಂತ್ರಜ್ಞಾನ ಕ್ಷೇತ್ರವನ್ನು ಮಾತ್ರ ಅವಲಂಬಿಸಿವೆ. ಆದರೆ ನಮ್ಮ ಪಾಲಿನ ಪುಣ್ಯ ಎಂದರೆ ಭಾರತಾಂಭೆಯ ಮಡಿಲಲ್ಲಿ ಜನಿಸಿದ ನಮಗೆ ನಮ್ಮ ದೇಶದ ಅಭಿವೃದ್ಧಿಗೆ ನಾವು ಕೇವಲ ತಂತ್ರಜ್ಞಾನವನ್ನು ಅವಲಂಬಿಸಬೇಕಾಗಿಲ್ಲ. ಪರಂಪರಾಗತವಾಗಿ ಬಂದ ಕೃಷಿ ನಮ್ಮ ಅಭಿವೃದ್ಧಿಗೆ ಪೂರಕವಾಗಿದೆ.

ಸ್ನೇಹಿತರೆ, ಮಂದುವರಿದ ರಾಷ್ಟ್ರಗಳಿಗೆ ಹೋಲಿಸಿದಾಗ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರು ಸಹ ಸರಿಸಮನಾಗಿ ಪೈಪೋಟಿ ನಡೆಸುತ್ತಿದ್ದಾರೆ. ಹೆಮ್ಮೆಯ ವಿಷಯವೆಂದರೆ ಅದರಲ್ಲಿ ಕರ್ನಾಟಕದ ಪಾಲು ಹೆಚ್ಚಿನದು ಎಂದರೆ ತಪ್ಪೆನಿಲ್ಲ.

ಭಾರತದ ಬೆನ್ನೆಲುಬು ಕೃಷಿ. ಇಂದು ನಾವು ಶಿಕ್ಷಣ ಪಡೆದು ವಿದ್ಯಾವಂತರಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೆವೆ. ಅಂದರೆ ಅದಕ್ಕೆ ನಮ್ಮ ಪೂರ್ವಜರು ಕೃಷಿ ಭೂಮಿಯಲ್ಲಿ ಸುರಿಸಿದ ಬೆವರಿನ ಹನಿಯೇ ಕಾರಣ.

ಭಾರತದಂತಹ ದೇಶದಲ್ಲಿ ಇಂದಿಗೂ ಅದೆಷ್ಟೋ ಅವಿದ್ಯಾವಂತ ಮತ್ತು ವಿದ್ಯಾವಂತ ಬಡವರು ಮತ್ತು ಮದ್ಯಮರು ಕೃಷಿಯನ್ನೆ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಸರಕಾರ ಎಷ್ಟೋ ಯೋಜನೆಗಳನ್ನು ಜಾರಿಗೆ ತಂದರು ಸಹ ಎಷ್ಟೋ ರೈತರಿಗೆ ಸರಿಯಾದ ಫಲ‌ ಸಿಗುತ್ತಿಲ್ಲ. ಭಾರತದ ಭೂಮಿಯೇ ಕೃಷಿ ಭೂಮಿ. ಇಲ್ಲಿ ಕೃಷಿಗೆ ಒತ್ತನ್ನು ನೀಡಿದಲ್ಲಿ ಖಂಡಿತವಾಗಿಯೂ ನಮ್ಮ ದೇಶ ಇನ್ನೂ ಎತ್ತರಕ್ಕೆ ಬರುವುದರಲ್ಲಿ ಸಂಶಯವಿಲ್ಲ.

ನಮ್ಮ ದೇಶದ ಅಭಿವೃದ್ಧಿಗೆ ಎರಡು ಅಂಶಗಳು ನಮ್ಮೊಟ್ಟಿಗಿವೆ. ಮೊದಲನೆಯದು ಕೃಷಿ, ಎರಡನೆಯದು ತಂತ್ರಜ್ಞಾನ. ಕೃಷಿಯಲ್ಲೆ ತಂತ್ರಜ್ಞಾನವನ್ನು ಬಳಸಿ ಕೃಷಿಗೆ ಇನ್ನೂ ಹೆಚ್ಚಿನ ಮಹತ್ವವನ್ನು ಕೊಟ್ಟು ಕೃಷಿಯನ್ನು ಉನ್ನತಗೋಳಿಸುವುದರ ಮೂಲಕ ತಂತ್ರಜ್ಞಾನದಲ್ಲೂ‌ ಸಾಧನೆಗೈದಾಗ ಮಾತ್ರ ಆರ್ಥಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವುದರಲ್ಲಿ ಸಂಶಯವಿಲ್ಲ.

ಜೈ ಹಿಂದ!

Leave a Reply

Your email address will not be published. Required fields are marked *