ಆತನೊಬ್ಬ ಅಪ್ರತಿಮ ಹೋರಾಟಗಾರ
ತನ್ನ ದೇಶಕ್ಕಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿ. ಆತನೊಬ್ಬ ಅದ್ಭುತ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮಹಾನ್ ವಾಗ್ಮಿ ಮತ್ತು ನಿಸ್ವಾರ್ಥ ಸಮಾಜ ಸೇವಕ. ಅವರನ್ನ ಕೆಲವರು ಭಾರತ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಿದರೆ, ಇನ್ನು ಕೆಲವರು ಅವರನ್ನು ಕೋಮುವಾದಿಯಾಗಿಯೂ, ಚಾಣಕ್ಯ ನಿತಿಯವರಾಗಿಯೂ ಭಾವಿಸುತ್ತಾರೆ. ಅದೇನೆ ಇರಲಿ ಚಾಣಕ್ಯನು ಎಷ್ಟು ಶ್ರೇಷ್ಠನೋ ಇವರೂ ಅಷ್ಟೆ ಶ್ರೇಷ್ಠ.
ಸ್ವಾತಂತ್ರ್ಯ ಅನ್ನೊದು ಆತನ ಕಣಕಣದಲ್ಲೂ ಬೆರೆತಿತ್ತು. ಸ್ವಾತಂತ್ರ್ಯದ ಮಹಾಯಜ್ಞಕ್ಕೆ ತನ್ನನ್ನು ಸಂಪೂರ್ಣವಾಗಿ ಆಹುತಿಯಾಗಿಸಿಕೊಂಡವನು, ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ಸರಕಾರ ನೀಡಿದ ಎರಡೆರಡು ಜೀವಾವಧಿ ಶಿಕ್ಷೆಯನ್ನು ಅನುಭವಿಸಿದ ವ್ಯಕ್ತಿ ಈತ. ಆದರೆ ಇಂತರ ಮಹಾನ್ ಚೇತನವನ್ನು ಸ್ವತಂತ್ರ ಭಾರತ ಅದೇಷ್ಟು ಹೀನಾಯವಾಗಿ ನಡೆಸಿಕೊಂಡಿತು, ಇವತ್ತಿಗೂ ಕೂಡ ಆತನ ಬಗ್ಗೆ ಒಂದಿಷ್ಟು ಜನ ಅನಾಗರಿಕವಾಗಿ ಮಾತನಾಡುತ್ತಾರೆ. ಅಂತಹ ಜನರನ್ನು ಕಂಡರೆ ನೀಜವಾದ ದೇಶಭಕ್ತರಿಗೆ ಅಸಹ್ಯವಾಗದೆ ಇರದು.
ಮೇ 28, 1883 ಮಹಾರಾಷ್ಟ್ರದ ನಾಸಿಕ್ ನ ಭಾಗೂರು ಎಂಬಲ್ಲಿ ಧಾಮೋಧರ ಪಂತ ಹಾಗೂ ರಾಧಾಬಾಯಿ ದಂಪತಿಗಳಿಗೆ ಗಂಡು ಮಗುವಿನ ಜನನವಾಯಿತು. ಅದೆ ಮಗು ಸ್ವಾತಂತ್ರ್ಯ ಸಂಗ್ರಾಮದ ಒಬ್ಬ ಅಪ್ರತಿಮ ಹೋರಾಟಗಾರನಾಗುತ್ತಾನೆಂದು ಯಾರಿಗೆ ಗೊತ್ತಿತ್ತು?. ಅಂದು ಜನಿಸಿದ ಮಗುವಿನ ಹೆಸರೆ “ವಿನಾಯಕ ದಾಮೋದರ ಸಾವರ್ಕರ”
ನಾಸಿಕ್ ನ ಶಿವಾಜಿ ಶಾಲೆಯಲ್ಲಿ ಮೊದಲು ಶಿಕ್ಷಣ ಆಯಿತು. ತನ್ನ ತಾಯಿಯವರಿಂದ ಅನೇಕ ಕಥೆಗಳನ್ನು ಕೇಳಿ ಅದನ್ನು ಮೈಗೂಡಿಸಿಕೊಂಡಿದ್ದ, ವಿಧಿ ಅವರ ತಾಯಿಯನ್ನು ಅಚಾನಕ್ ಆಗಿ ಕಿತ್ತುಕೊಂಡಿತು. ತಾಯಿ ಇಲ್ಲವಾದರೂ ತಾಯಿಯಿಂದ ಕಲಿತ ಪಾಠಗಳು ಮರೆಯಲಿಲ್ಲ. ಕುಲದೇವತೆ ದುರ್ಗಾದೇವಿಯ ಮುಂದೆ ನಿಂತು ತನ್ನ ದೇಶಕ್ಕಾಗಿ ಹೋರಾಡುತ್ತೆನೆ ಎಂದು ಪ್ರತಿಜ್ಞೆ ಮಾಡಿದಾಗ ಆತನ ವಯಸ್ಸು 15 ತುಂಬಿ ಹದಿನಾರು.
1899 ರಲ್ಲಿ ದೇಶವನ್ನು ಕಾಡಿದ ಪ್ಲೇಗ್ ರೋಗಕ್ಕೆ ತುತ್ತಾಗಿ ಇವರ ತಂದೆ ನಿಧನರಾದರು. ಅದಾದ ಎರಡು ವರ್ಷಗಳ ಬಳಿಕ ಅಂದರೆ 1901 ರಲ್ಲಿ ಯುಮುನಾಬಾಯಿ ಎಂಬುವವರೊಂದಿಗೆ ಸಾವರ್ಕರ ಅವರ ವಿವಾಹವಾಯಿತು.
ಬಾಲಗಂಗಾಧರ ತಿಲಕ್ ರ ಸ್ವರಾಜ ಪಕ್ಷದ ತತ್ವಗಳಿಗೆ, ಅವರ ದೇಶಪ್ರೇಮಕ್ಕೆ ಪ್ರಭಾವಿತರಾಗಿ “ಸ್ವರಾಜ” ಪಕ್ಷದ ಸದಸ್ಯರಾದರು. 1902ರಲ್ಲಿ ಪುಣೆಯ ಫರ್ಗೋಸನ್ ಕಾಲೇಜಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿ, 1906 ರಲ್ಲಿ ಕಾನೂನು ಶಾಸ್ತ್ರ ವಿದ್ಯಾಭ್ಯಾಸಕ್ಕಾಗಿ ಲಂಡನ್ ಗೆ ತೆರಳಿದರು.
ಕಾನೂನು ಶಾಸ್ತ್ರ ಓದಲು ಲಂಡನ್ ಗೆ ಹೋದ ಸಾವರ್ಕರ ಸುಮ್ಮನೆ ವಿದ್ಯಾಭ್ಯಾಸ ಮಾಡುತ್ತ ಕೂರಲಿಲ್ಲ. ಲಂಡನ್ ನಲ್ಲಿದ್ದ ಭಾರತೀಯರನ್ನು ಒಗ್ಗೂಡಿಸಿ ಸ್ವತಂತ್ರ ಭಾರತದ ಸಮಾಜವೆಂಬ ಹೆಮ್ಮರದ ಬಿಜವನ್ನು ಬಿತ್ತಿದರು. ಸಾವರ್ಕರ ಅವರ ಮಾತನ್ನು ಕೆಳಲು ಬರುವವರ ಸಂಖ್ಯೆ ದಿನೆ ದಿನೆ ಹೆಚ್ಚಾಯಿತು.
1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನೆನಪಿಗಾಗಿ 1908 ರಲ್ಲಿ ಲಂಡನ್ ನಲ್ಲಿ ಒಂದು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಬಂದು ಸೇರಿದ್ದವರೆಲ್ಲಾ 1857 ಎಂಬ ಬ್ಯಾಡ್ಜ ಅನ್ನು ಹಾಕಿದ್ದರು. ಆ ಬ್ಯಾಡ್ಜ ಹಾಕಿದ ಕಾರಣ ಬ್ರಿಟಿಷರಿಗೆ ಕೋಪವನ್ನುಂಟು ಮಾಡಿತು. ಅಂದಿನ ಸಭೆಯಲ್ಲಿ ಸಾವರ್ಕರ ಮಾಡಿದ ಭಾಷಣ ಅಲ್ಲಿ ಸೇರಿದ್ದ ಭಾರತೀಯ ವಿದ್ಯಾರ್ಥಿಗಳ ನಡುವೆ ಅವರ ಪ್ರಭಾವವನ್ನು ಹೆಚ್ಚಿಸಿತು. ಆ ಕಾರ್ಯಕ್ರಮದಲ್ಲಿ ತನ್ನ ಬ್ಯಾಡ್ಜಗೆ ಕೈಹಾಕಲು ಬಂದ ಬ್ರಿಟಿಷ್ ಅಧಿಕಾರಿಗೆ ಮದನಲಾಲ್ ಧಿಂಗ್ರ ಕಪಾಳ ಮೊಕ್ಷ ಮಾಡಿದರು. ಧಿಂಗ್ರ ಅಲ್ಲಿಗೆ ಸುಮ್ಮನಾಗಲಿಲ್ಲ ಭಾರತಿಯರನ್ನೆ ಭಾರತೀಯ ಹೋರಾಟಗಾರ ವಿರುದ್ದ ಬೇಹುಗಾರರನ್ನಾಗಿ ಬಳಸುತ್ತಿದ್ದ ಸರ್ ವಿಲಿಯಮ್ ಖರ್ಜನ್ ಎಂಬ ಬ್ರಿಟಿಷ್ ಅಧಿಕಾರಿಯನ್ನು ಗುಂಡಿಟ್ಟು ಕೊಂದುಬಿಟ್ಟನು.
ಅದೊಂದು ಪ್ರಕರಣದಲ್ಲಿ ಮದನಲಾಲ್ ಡಿಂಗ್ರನನ್ನು ಬ್ರಿಟಿಷರು ಬಂಧಿಸಿದರು. ವಿಚಾರಣೆಯ ನೆಪದಲ್ಲಿ ಮರಣ ದಂಡನೆಯನ್ನು ವಿಧಿಸಿದರು. ಅಷ್ಟಕ್ಕೆ ಸುಮ್ಮನಾಗದೆ ಡಿಂಗ್ರನು ಕೊಲೆಮಾಡಿದ್ದಕ್ಕೆ ಸಾವರ್ಕರ ಅವರೆ ಪ್ರೇರಣೆ ಎಂದು 1910 ರಲ್ಲಿ ಸಾವರ್ಕರ ಅವರನ್ನು ಬಂಧಿಸಿ, ಲಂಡನ್ ನಿಂದ ಭಾರತಕ್ಕೆ ಹಡಗಿನ ಮುಖಾಂತರ ಕರೆತರುವಾಗ ಹಡಗಿನ ಶೌಚಾಲಯದ ಕಿಟಗಿಯಿಂದ ಸಾವರ್ಕರ ಸಮುದ್ರಕ್ಕೆ ಹಾರಿದರು. ಹಾರುವಾಗ ಕಿಟಕಿಯ ಗಾಜಿನ ಚೂರುಗಳು ಸಾವರ್ಕರ ಅವರ ಮೈಕೈಗಳನ್ನು ತರಚಿತು. ಬ್ರಿಟಿಷರಿಂದ ತಪ್ಪಿಸಿಕೊಂಡ ನಂತರ ಪ್ರಾನ್ಸ ಪೋಲಿಸರ ಕೈಗೆ ಸಿಕ್ಕಿ, ಪ್ರಾನ್ಸ ಪೋಲಿಸರು ಬ್ರಿಟಿಷರ ದುಡ್ಡಿನ ಆಸೆಗೆ ಸಾವರ್ಕರ ಅವರನ್ನು ಆಂಗ್ಲರಿಗೆ ಒಪ್ಪಿಸಿದರು.
ವಿನಾಯಕ ಸಾವರ್ಕರ ಅವರನ್ನು ಆಂಗ್ಲರು ವಿಚಾರಣೆಯ ನಾಟಕವಾಡಿ ಎರಡು ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಜೈಲು ಶಿಕ್ಷೆಯು ಸಾಧಾರಣ ಜೈಲಿನಲ್ಲಿ ಅಲ್ಲ ಅಂಡಮಾನಿಗೆ ಭೂಲೋಕದ ನರಕದಲ್ಲಿ ವಿಧಿಸಿದ್ದು ಕಾಲಾಪಾನಿ (ಕರಿನಿರು) ಶಿಕ್ಷೆ. ಜಗತ್ತು ಕಂಡು ಕೆಳರಿಯದ ಭಯಾನಕ ಶಿಕ್ಷೆ ಅದು.
ದುಃಖ ಮರೆಯಲು ತಮ್ಮ ಕೈಗೆ ಹಾಕಿದ್ದ ಬೇಡಿಗಳ ಮೊಳೆಯಿಂದ ಜೈಲಿನ ಗೋಡೆಯ ಮೇಲೆ 10,000 ಸಾಲುಗಳನ್ನು ಸಾವರ್ಕರ ಬರೆದಿದ್ದರು. 1913 ರಲ್ಲಿ ಗಾಂಧಿಜಿ ಅಂಡಮಾನ ಜೈಲಿಗೆ ಬೇಟಿ ಕೊಟ್ಟಾಗ ಅವರ ಬಳಿ ಖೈದಿಗಳಿಗೆ ಅಕ್ಷರಾಭ್ಯಾಸ ಮಾಡಲು ಅನುವು ಮಾಡುವಂತೆ ಒತ್ತಡ ತರಬೇಕೆಂದು ಸಾವರ್ಕರ ಗಾಂಧೀಜಿ ಬಳಿ ಹೇಳಿಕೊಂಡರು.
ಸಾವರ್ಕರ ಅವರ ನಿರಂತರ ಹೊರಾಟದ ಪ್ರಯುಕ್ತ ಅಂಡಮಾನ್ ಜೈಲಿನಲ್ಲಿ ಕೊಂಚ ಬದಲಾವಣೆಯಾಗಿ ತಮ್ಮ ಜೊತೆಗಾರರನ್ನು ಸುರಕ್ಷಿತವಾಗಿಸಲು ಸಾವರ್ಕರ ಪ್ರಯತ್ನಿಸಿದರು. ಇದೆ ಸಮಯದಲ್ಲೆ “ಕಾಲಾಪಾನಿ” ಎಂಬ ಜಗತ್ತಿನ 17 ಭಾಷೆಗೆ ಭಾಷಾಂತರಗೊಂಡ ಕಥನ ತಯಾರಾಗಿದ್ದು. “Transortation of my life” ಕೃತಿಯನ್ನು ಬರೆದರು.
ಲಂಡನ್ ನಲ್ಲಿ ಪ್ರಕಟವಾಗುತ್ತಿದ್ದ ಮರಾಠಿ ಪಾಕ್ಷಿಕಕ್ಕೆ ಅಂಡಮಾನ್ ಜೈಲಿನಿಂದ ಲೇಖನವನ್ನು ಬರೆದು ಕೊಡುತ್ತಿದ್ದ ಏಕೈಕ ಪತ್ರಕರ್ತ ಸಾವರ್ಕರ. ಅವರು ಈ ಮಧ್ಯ ತಮ್ಮನ್ನ ಬಿಡುಗಡೆ ಗೊಳಿಸುವಂತರ ಕೋರಿ ಬ್ರಿಟಿಷ್ ಕ್ಲೆಮೆನ್ಸ ಪಿಟಿಷನ್ ಸಲ್ಲಿಸಿದರು.1921 ರಲ್ಲಿ ಅಂಡಮಾನ ಜೈಲಿಂದ ಮಹಾರಾಷ್ಟ್ರ ದ ಹೆರವಾಳ ಜೈಲಿಗೆ ಸ್ಥಳಾಂತರ ಮಾಡಿದರು. 1924 ರಲ್ಲಿ ಸಾವರ್ಕರ ಅವರನ್ನು ಬ್ರಿಟಿಷ್ ಸರಕಾರ ಬಿಡುಗಡೆ ಮಾಡಿದರು.
ಬಿಡುಗಡೆಯ ನಂತರ ತಮ್ಮ ಬರವಣಿಗೆಯ ಮೂಲಕ ಭಾರತದ ಮನೆ ಮನೆಯಿಂದ ಪ್ರತಿಯೊಬ್ಬರಂತೆ ಹೊರಾಟಗಾರರನ್ನು ಸೃಷ್ಟಿಸಲು ಮುನ್ನುಡಿಯಾಗಿ, “ಭಾರತ ಸ್ವತಂತ್ರ ಸಂಗ್ರಾಮ” ಎಂಬ ಪುಸ್ತಕ ರಚಿಸಿದರು. ಆದರೆ ಭಾರತದಲ್ಲಿ ಆ ಪುಸ್ತಕಕ್ಕೆ ಬಹಿಷ್ಕಾರ ಹೇರಲಾಯಿತು. ಆದರೆ ಪ್ರಾನ್ಸನಲ್ಲಿ ಈ ಪುಸ್ತಕಕ್ಕೆ ಅದ್ಭುತ ಪ್ರತಿಕ್ರಿಯೆ ದೊರೆಯಿತು.
1937 ರಲ್ಲಿ ಹಿಂದೂ ಮಹಾಸಭಾದ ಅಧ್ಯಕ್ಷರಾದರು. ಮೊಹಮ್ಮದ ಅಲಿ ಜಿನ್ನಾ ಹಾಗು ಮುಸ್ಲೀಮ್ ಲೀಗ್ ನ ಕುತಂತ್ರಿಗಳ ವಿರುದ್ದ ದೇಶವನ್ನು ಎಚ್ಚರಿಸುವಲ್ಲಿ ತುಂಬಾ ಪ್ರಮುಖ ಪಾತ್ರವನ್ನು ವಹಿಸಿದರು. ಮೊದಲಿನಿಂದಲೂ ಗಾಂಧಿಜಿಯವರ “hypocritic” ತನಕ್ಕೆ ಸಾವರ್ಕರ ಅವರ ವಿರೋಧವಿತ್ತು. 1942 “quit India” ಚಳುವಳಿಗೆ ಸಾವರ್ಕರ ಒಪ್ಪಿಗೆ ಇರಲಿಲ್ಲ. ನಮ್ಮವರು ಯುದ್ದ ತಂತ್ರವನ್ನು ತಿಳಿದಿರಬೇಕು ಎಂದು ಎರಡನೆ ಮಹಾಯುದ್ದದಲ್ಲಿ ಭಾಗವಹಿಸುವಂತೆ ತಿಳಿಸಿದ್ದರು. ಹಿಂದೂ ನೀತಿಗಳನ್ನು ರಕ್ಷಿಸುವ ಸಲುವಾಗಿ ಬೆಂಗಾಲ್ ಮತ್ತು ಸಿಂಧ್, ನಾರ್ಥ ವೆಸ್ಟ್ ಗಳಲ್ಲಿ ಮುಸ್ಲೀಮ್ ಲೀಗ್ ಜೊತೆ ಸೆರಿ ಸಮ್ಮಿಶ್ರ ಸರಕಾರ ರಚಿಸಿದರು.
ಅಂದು ಇಸ್ರೇಲ್ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿಕೊಂಡಾಗ ಅದನ್ನು ಪ್ರಶಂಸಿದರು. ವಿಶ್ವಸಂಸ್ಥೆ ಇಸ್ರೇಲ್ ಸ್ವತಂತ್ರ ದೇಶದ ಮಾನ್ಯತೆ ಕೊಡುವುದರ ವಿರುದ್ದ ನೆಹರು ಸರಕಾರ ಮತ ಚಲಾಯಿಸಿತು. ಅದನ್ನು ಪ್ರಭಲವಾಗಿ ಸಾವರ್ಕರ ಕಂಡಿಸಿದರು. ನೆಹರು ಅವರಿಗೆ ಸಾವರ್ಕರ ಅವರನ್ನು ಇದೆ ರೀತಿ ಬಿಟ್ಟರೆ ಪ್ರಭಲ ಪ್ರತಿಸ್ಪರ್ಧಿಯಾಗುತ್ತಾರೆ ಎಂದು ಅನಿಸಿತೊ ಏನೋ ಆ ದೇವರಿಗೆ ಗೊತ್ತು. ಗಾಂಧೀಜಿ ಹತ್ಯೆಯಲ್ಲಿ ಹಿಂದೂ ನಾಯಕನೆನಿಸಿಕೊಂಡ ಸಾವರ್ಕರ ಅವರನ್ನು ಕನಿಷ್ಟ ವಿವೇಚನೆ ಇಲ್ಲದೆ ಆಗಿನ ನೆಹರು ಸರಕಾರ ಪೋಲಿಸರು ಬಂಧಿಸಿದರು.
ದೇಶಕ್ಕಾಗಿ ಜೀವಾವಧಿ ಶಿಕ್ಷೆ, ಕಲಾಪಾನಿ ಶಿಕ್ಷೆಗಳನ್ನು ಅನುಭವಿಸಿದನೊ, ತಮ್ಮ ಲೇಖನದ ಮೂಲಕ ಭಾರತೀಯರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಹಚ್ಚಿದನೊ , ತಮ್ಮ ವಾಕೃತಿಗಳ ಮೂಲಕ ಯುವಕರ ನರನಾಡಿಗಳಲ್ಲಿ ದೇಶಪ್ರೇಮದ ಕಿಚ್ಚನ್ನು ಹಚ್ಚಿದನೊ, ಅಂತಹ ಮಹಾನ್ ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರನನ್ನು ಅಂದಿನ ಸ್ವತಂತ್ರಯ ಭಾರತದ ಸರಕಾರ ಕೊಲೆ ಆಪಾದನೆಯ ಮೇಲೆ ಜೈಲಿಗೆ ಹಾಕಿದರು. ಸಾವರ್ಕರ ಮನೆಯ ಮೇಲೆ ನೆಹರು ಸರಕಾರದ ಅಭಿಮಾನಿಗಳು ಕಲ್ಲುತುರಾಟ ಮಾಡಿದರು. ಇದಕ್ಕಿಂತ ದುರಂತ ಮತ್ತೊಬ್ಬ ಹೊರಾಟಗಾರನಿಗೆ ಆಗಲಿಲ್ಲ. ಅಂದಿನ ಸರಕಾರ ಹಿಂದೂ ಸಭಾ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳಿಗೆ ನಿಷೇಧ ಹೇರಿತು. ಸೂಕ್ತ ಸಾಕ್ಷ್ಯಗಳಿಲ್ಲದೆ ಸಾವರ್ಕರ ಅವರನ್ನು ನಿರಪರಾಧಿ ಎಂದು ನ್ಯಾಯಾಲಯ ಬಿಡುಗಡೆಗೊಳಿಸಿತು.
ಜೈಲಿನಿಂದ ಬಂದ ನಂತರ ಮಾನಸಿಕವಾಗಿ ತುಂಬಾ ಹಡಗೆಟ್ಟಿದ್ದರು. 1966 ಆರೋಗ್ಯದಲ್ಲಿ ಏರುಪೇರಾಯಿತು. ಫೇಬ್ರವರಿ 1 ರಂದು ತಾವು ಸೇವಿಸುತ್ತಿದ್ದ ಆಹಾರ ಔಷಧ ಹಾಗೂ ನೀರು ಎಲ್ಲವನ್ನು ಸಂಪೂರ್ಣ ನಿಲ್ಲಿಸಿ, ಆತ್ಮಾರ್ಪಣೆ ವೃತ ಸಂಕಲ್ಪಿಸಿದರು. ಸಾಯುವ ಕೆಲ ದಿನಗಳ ಮೊದಲು “ಆತ್ಮಹತ್ಯೆ ನಹಿ ಆತ್ಮಾರ್ಪಣೆ” ಎಂಬ ಲೆಖನ ಬರೆದರು. ಫೆ 26 ರಂದು ದೇಶದ ಸಮಸ್ತರನ್ನಗಲಿದರು.
ಇವರ ದೇಹವನ್ನು ದರ್ಶನಕ್ಕಿಟ್ಟಾಗ 2500 ಸಮವಸ್ತ್ರ ಸ್ವಯಂಸೇವಕರಿಂದ ಗೌರವ ಪಡೆದ ಜಗದ ಏಕೈಕ ಸ್ವಾತಂತ್ರ್ಯ ಸೇನಾನಿ ವಿನಾಯಕ ದಾಮೋದರ್ ಸಾವರ್ಕರ.
ಆತನ ಬಗ್ಗೆ ಬರೆದಷ್ಟು ಮುಗಿಯದ ಕಥೆ. ಅಂತಹ ದೇಶಭಕ್ತನಿಗೆ ಸರಿಯಾದ ಗೌರವ ಸ್ವತಂತ್ರ ಭಾರತದಲ್ಲಿ ಸಿಗಲೆಂಬುದು ನನ್ನ ಪ್ರಾರ್ಥನೆ
-ಹಲವಾರು ಮಾಹಿತಿಗಳಿಂದ ಸಂಗ್ರಹಿಸಿದ ಲೇಖನ